ಪರಮಪೂಜ್ಯ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ

ಯದುಗಿರಿ ಯತಿರಾಜ ಮಠ, ಮೇಲುಕೋಟೆ

ಅವರ ದಿವ್ಯ ಸಾನಿಧ್ಯದಲ್ಲಿ

ಉಭಯವೇದಾಂತ ಶ್ರೀವೈಷ್ಣವ ಸಭಾ (ರಿ)
ದಾಸನಪುರದಲ್ಲಿ

ಶ್ರೀ ಭಗವದ್ ರಾಮಾನುಜಾಚಾರ್ಯರ ತಿರುನಕ್ಷತ್ರ ಮಹೋತ್ಸವದ ಅಂಗವಾಗಿ,
ಸಾಮೂಹಿಕ ಉಪನಯನ ಹಾಗೂ ಸಮಾಶ್ರಯಣ ಕಾರ್ಯಕ್ರಮವನ್ನು
ಶ್ರದ್ಧಾಪೂರ್ವಕವಾಗಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿವರ:
📅 ದಿನಾಂಕ: 18-05-2025
📍 ಸ್ಥಳ: ಉಭಯವೇದಾಂತ ಶ್ರೀವೈಷ್ಣವ ಸಭಾ, ದಾಸನಪುರ
🕘 ಸಮಯ: ಬೆಳಿಗ್ಗೆ 9.00 ಗಂಟೆಗೆ

ಈ ಪುಣ್ಯ ಮಹೋತ್ಸವದಲ್ಲಿ ಭಾಗವಹಿಸಿ, ಶ್ರೀಭಾಷ್ಯಕಾರರ ಕೃಪೆಯನ್ನು ಪಡೆಯಲು ಸದ್ಭಕ್ತರನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.


ಕಾರ್ಯಕ್ರಮದ ವಿಶೇಷತೆ


ಶ್ರೀರಾಮಾನುಜಾಚಾರ್ಯಾ ಬಗ್ಗೆ ಉಪನ್ಯಾಸಗಳು – ಭಗವದ್ ರಾಮಾನುಜಾಚಾರ್ಯರ ಮಹಿಮೆ ಮತ್ತು ಅವರ ತತ್ವದ ಸಂದೇಶ
ಸಾಮೂಹಿಕ ಉಪನಯನ – ವೈದಿಕ ಸಂಪ್ರದಾಯದ ಪ್ರಕಾರ ಉಪನಯನ ಸಂಸ್ಕಾರ
ಸಮಾಶ್ರಯಣ – ಶ್ರೀವೈಷ್ಣವ ಪರಂಪರೆಯ ಅನುಸಾರ ಶರಣಾಗತಿ ಸ್ವೀಕಾರ
ಅನ್ನಸಂತರ್ಪಣೆ – ಪ್ರಸಾದ ಸೇವೆಯ ಮೂಲಕ ಭಕ್ತರು ಭಗವದ್ ಅನುಗ್ರಹವನ್ನು ಪಡೆಯುವ ಅವಕಾಶ

ನಾವು ಈ ಪವಿತ್ರ ಮಹೋತ್ಸವಕ್ಕೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಪ್ರೀತಿಪೂರ್ವಕವಾಗಿ ಆಹ್ವಾನಿಸುತ್ತೇವೆ. ನಿಮ್ಮ ಹಾಜರಾತಿ ಈ ಸಮಾರಂಭವನ್ನು ಇನ್ನಷ್ಟು ದಿವ್ಯಮಯವಾಗಿಸುವುದು ನಿಸ್ಸಂದೇಹ.

ಮಕ್ಕಳಿಗೆ ಉಪನಯನ ಮಾಡಿಸುವ ಪೋಷಕರು ನೋಂದಾಯಿಸಿಕೊಳ್ಳತಕ್ಕದ್ದು.
ನೋಂದಾಯಿಸಿಕೊಳ್ಳಲು ಈ ಕೆಳಗಿನ ಲಿಂಕ್‌ ಅನ್ನು ಒತ್ತಿರಿ ಹಾಗೂ ವಟುವಿನ ವಿವರಗಳನ್ನು ನಮೂದಿಸಿರಿ.

ವಟುಗಳ ವಿವರವನ್ನು ದಾಕಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಹರೇ ಶ್ರೀನಿವಾಸ | ಶ್ರೀಮತೇ ರಾಮಾನುಜಾಯ ನಮಃ

https://www.facebook.com/profile.php?id=61562110870907

https://www.instagram.com/srivaishnavasamagama/

https://chat.whatsapp.com/BrBVOtA2n0tIkDi8dOcOKh

Leave a comment